ತುರ್ಕಿಭಾಷೆ -
ತುರ್ಕಿ ಭಾಷೆಗಳು ಎಲ್ಟೇಯಿಕ್ ವರ್ಗದಲ್ಲಿ ಸೇರಿಸಲಾಗಿರುವ ಮಂಗೋಲಿಯನ್ ಮತ್ತು ತುಂಗ್‍ಸಿಕ್ ಭಾಷೆಗಳೊಡನೆ ಸಂಬಂಧ ಹೊಂದಿವೆಯೆಂದು ಭಾವಿಸಲಾಗಿದೆ. ತುರ್ಕಿ ಮತ್ತು ಇತರ ಎಲ್ಟೇಯಿಕ್ ಭಾಷೆಗಳ ನಡುವಣ ಕೊಂಡಿಗಳು ಬಹು ಸೂಕ್ಷ್ಮವಾಗಿವೆ. ತುರ್ಕಿ ಭಾಷೆಗಳು ಸ್ವತಃ ಎದ್ದು ಕಾಣುವಂಥ ಏಕರೂಪತೆಯನ್ನು ಪರಸ್ಪರ ಸಾಮಾನ್ಯವನ್ನೂ ತೋರುತ್ತವೆ. ಐತಿಹಾಸಿಕ ಇತವೃತ್ತಾತ್ಮಕ ದತ್ತಾಂಶಗಳ ಪ್ರಕಾರ ಅತ್ಯಂತ ಪ್ರಾಚೀನ ತುರ್ಕಿ ಶಾಸನಗಳು ಕ್ರಿ. ಶ. ಎಂಟನೆಯ ಶತಮಾನದಷ್ಟು ಹಿಂದಿನವಾಗಿವೆ.

ತುರ್ಕಿ ಭಾಷೆಗಳು, ಐತಿಹಾಸಿಕವಾಗಿ, ಈ ಕೆಳಗೆ ಕಾಣಿಸಿರುವ ಶೀರ್ಷಿಕೆಗಳಿಗೆ ಒಳಪಡುತ್ತವೆ.
1) ಪ್ರಾಚೀನ ತುರ್ಕಿ : ಓರ್‍ಖೋವು ಮತ್ತು ಯೆರಿಸೆಯಿ ಶಾಸನಗಳಲ್ಲಿಯ ತುರ್ಕಿ ಭಾಷೆ.
2) ಮಧ್ಯಕಾಲೀನ ತುರ್ಕಿ : (ಅ) ಪಶ್ಚಿಮ ಸಮೂಹ: ಕುಮನ್, ಕಿಪ್‍ಛಕ್; (ಆ) ಪೂರ್ವ ಸಮೂಹ: ಕರಖನಿದ್, ಖ್ವರೇಜೇಮಿಯನ್, ಛಗ್‍ತಯಿ
3) ಆಧುನಿಕ ತುರ್ಕಿ: (ಅ) ನೈಋತ್ಯ (ತುರ್ಕಮೆನ್) ಸಮೂಹ;

ಸಮೂಹ (1) ಪೂರ್ವ ಆಟೊಮನ್, ಆಧುನಿಕ ತುರ್ಕಿಸ್ತಾನದ ತುರ್ಕಿ, ಆನಟೋಲಿಯ ಮತ್ತು ಬಾಲ್ಕನ್ ದೇಶದ ಆಟೊಮನ್ ಉಪಭಾಷೆಗಳು. ಕ್ರಿಮಿಯಾದ ಆಟೊಮ್ನ, ಗಪಾeóï ತುರ್ಕಿ (ರೂಮೇನಿಯದ್ದು); ಬಲ್ಗೇರಿಯ, ಬೊಸ್ನಿಯ, ಮ್ಯಾಸಿಡೊನಿಯ ಮತ್ತು ಕುಲವಾಶ್‍ಗಳ ತುರ್ಕಿ ಉಪಭಾಷೆಗಳು.

ಸಮೂಹ (ii) ಅeóÉೀರಿ (ಅಜûರ್‍ಬೈಜಾನಿ) - ಅಜûರ್ ಬೈಜಾನ್ (ಸೋವಿಯೆತ್ ದೇಶ) ಮತ್ತು ಇರಾನಿನ ವಾಯುವ್ಯ ಭಾಗದಲ್ಲಿ ಪ್ರಚುರವಾಗಿದೆ.

ಸಮೂಹ (iii) ಕಶ್‍ಗಯಿ, ಐನಲು ಮತ್ತು ಬಹರಲು - ಇರಾನಿನ ವಾಯುವ್ಯ ಭಾಗದಲ್ಲಿ ಪ್ರಚುರವಾಗಿವೆ.

ಸಮೂಹ (iv) ತುರ್ಕಮೆನ್-ತುರ್ಕ್‍ಮೆನ್ (ಸೋವಿಯೆತ್ ದೇಶ) ಪ್ರಾಂತ್ಯದಲ್ಲಿ ಬಳಕೆಯಲ್ಲಿವೆ. ಹಾಗೂ ಸ್ವಾಯತ್ತ ಕರ-ಕಲ್ಚಕ್ (ಸೋವಿಯೆತ್ ದೇಶ), ಉeóÉ್ಬಕ್ (ಸೋವಿಯೆತ್ ದೇಶ) ಕಜûಕಸ್ಥಾನ್ (ಸೋವಿಯೆತ್ ದೇಶ), ಇರಾನ್ ಮತ್ತು ಆಫ್‍ಘಾನಿಸ್ಥಾನಗಳ ವರೆಗೆ ವಿಸ್ತರಿಸಿಕೊಂಡಿದೆ. ಇತ್ತ ಆನಟೋಲಿಯ, ಸಿರಿಯ ಮತ್ತು ಟ್ರಾನ್ಸ್‍ಕಾಕೇಷಿಯಗಳಲ್ಲಿಯೂ ತುರ್ಕ್‍ಮೆನ್ನಿನ ಸಣ್ಣ ಸಮೂಹಗಳು ಕಾಣದೊರೆಯುತ್ತವೆ.

(ಆ) ಆಗ್ನೆಯ (ಛಗ್‍ತಯಿ ಅಥವಾ ಉeóÉ್ಬೀಕ್) ಸಮೂಹ : ಚೀನದ ಸಿಂಕಿಯಾಂಗ್ - ಉಯಿಫುರ್ ವಲಯದಲ್ಲಿ ಪೂರ್ವ ತುರ್ಕಿಸ್ತಾನಿ (ತುರ್ಕಿ) ಉಪಭಾಷೆಗಳು ಬಳಕೆಯಲ್ಲಿವೆ. ಉeóÉ್ಬೀಕ್‍ನಲ್ಲಿ (ಸೋವಿಯೆತ್ ದೇಶ), ಕರ-ಕಲ್ಪಕ್‍ನ (ಸೋವಿಯೆತ್ ದೇಶ) ದಕ್ಷಿಣ ಭಾಗದಲ್ಲಿ, ತುರ್ಕಮೆನ್‍ನ (ಸೋವಿಯೆತ್ ದೇಶ) ಪೂರ್ವಭಾಗದಲ್ಲಿ ತದ್‍ಝಿಕ್‍ನ (ಸೋವಿಯೆತ್ ದೇಶ) ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಕಜಕ್‍ನ (ಸೋವಿಯೆತ್ ದೇಶ) ದಕ್ಷಿಣ ಭಾಗದಲ್ಲಿ ಹಾಗೂ ಉತ್ತರ ಆಫ್‍ಘಾನಿಸ್ಥಾನದಲ್ಲಿ ಉeóÉ್ಬೀಕ್ ಭಾಷೆಯ ವಿವಿಧ ಉಪಭಾಷೆಗಳನ್ನು ಬಳಸಲಾಗುತ್ತಿದೆ. ಛಗ್‍ತಯಿ ಸಾಹಿತ್ಯಿಕ ಭಾಷೆಯೂ ಇದೇ ಸಮೂಹಕ್ಕೆ ಸೇರುತ್ತದೆ.

(ಇ) ವಾಯುವ್ಯ (ಕಿಪ್‍ಛಕ್) ಸಮೂಹ :

ಸಮೂಹ (1) ಕಿರ್‍ಗಿಜ್‍ನಲ್ಲಿ (ಸೋವಿಯೆತ್ ದೇಶ) ಬಳಕೆಯಲ್ಲಿರುವ ಕಿರ್‍ಗಿಜ್ ಚೀನೀ ಭೂಪ್ರದೇಶವನ್ನೂ ವ್ಯಾಪಿಸಿಕೊಳ್ಳುತ್ತದೆಯಲ್ಲದೇ ಆಫ್ಘಾನಿಸ್ಥಾನದಲ್ಲೂ ಕಾಣದೊರೆಯುತ್ತದೆ. ಈ ಸಮೂಹದ ಭಾಷೆಗಳಲ್ಲೆಲ್ಲ ಇದು ಈಶಾನ್ಯ ಸಮೂಹದ ಓಯಿರೋತ್ ಮತ್ತು ತಲೆಂತ್ ಭಾಷೆಗಳನ್ನು ತುಂಬ ಹೋಲುತ್ತದೆ; ಅವುಗಳೊಡನೆ ಸೇರಿ ಇದು ಒಂದು ಉಪಸಮೂಹವನ್ನು ರೂಪಿಸುತ್ತದೆ. ಈ ಉಪಸಮೂಹ ಈಶಾನ್ಯ ಮತ್ತು ವಾಯುವ್ಯ ಸಮೂಹಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ.

ಸಮೂಹ (ii) ಕಜûಕ್ : ಕಜûಕ್‍ನಲ್ಲಿ (ಸೋವಿಯೆತ್ ದೇಶ) ಕರ-ಕಲ್ಪಕ್ನಲ್ಲಿ (ಸೋವಿಯೆತ್ ದೇಶ) ಮತ್ತು ಸ್ವಲ್ಪಮಟ್ಟಿಗೆ ಮಂಗೋಲಿಯನ್ ಜನತಾ ಗಣ ರಾಜ್ಯದಲ್ಲಿ ಇದು ಬಳಕೆಯಲ್ಲಿದೆ.

ಸಮೂಹ (iii) ಕಜûಕ್ ಉಪಭಾಷೆಗಿಂತಲೂ ಹೆಚ್ಚಿನ ಭಾಷಿಗರನ್ನೇನೂ ಹೊಂದಿರದ ಕರ-ಕಲ್ಪಕ್ ಅನ್ನು ಕರ-ಕಲ್ಪಕ್‍ನಲ್ಲಿಯೂ (ಸೋವಿಯತ್ ದೇಶ) ಆಫ್ಘಾನಿಸ್ಥಾನದಲ್ಲಿರುವ ಕರ-ಕಲ್ಪಕ್ ಜನಾಂಗದಲ್ಲಿಯೂ ಬಳಸಲಾಗುತ್ತಿದೆ.

ಸಮೂಹ (iv) ನೊಗಯಿಗೆ ಮೂರು ಉಪಭಾಷೆಗಳಿವೆ : ಬಿಳಿಯ ನೊಗಯಿ, ಕರಿಯ ನೊಗಯಿ ಮತ್ತು ನಡುವಣ ನೊಗಯಿ. ಕರಛಯಿ-ಸ್ವಾಯತ್ತ ಓಬ್ಲಾಸ್ಟ್‍ನಲ್ಲಿ ಬಳಕೆಯಲ್ಲಿರುವ ಬಿಳಿಯ ನೊಗಯಿ ಉಳಿದ ಎರಡು ಉಪಭಾಷೆಗಳಿಂದ ಗಮನಾರ್ಹವಾಗಿ ಭಿನ್ನವಾಗಿವೆ. ಈ ಎರಡು ಉಪಭಾಷೆಗಳನ್ನು ದಗೇಸ್ಥಾನದಲ್ಲಿ (ಸೋವಿಯೆತ್ ದೇಶ) ಬಳಸುತ್ತಾರೆ.

ಸಮೂಹ (v) ಕುಮಿಕ್: ಇದೂ ದಗೇಸ್ಥಾನದಲ್ಲಿ (ಸೋವಿಯೆತ್ ದೇಶ) ಬಳಕೆಯಲ್ಲಿದೆ.

ಸಮೂಹ (vi) ಬಶ್‍ಕಿರ್ ; ಇದು ಬಶ್‍ಕಿರ್‍ನಲ್ಲಿ (ಸೋವಿಯೆತ್ ದೇಶ) ಬಳಕೆಯಲ್ಲಿದೆ. 

ಸಮೂಹ (vii) ಕಜನ್ ತಾತರ್‍ನಂತ ವೋಲ್ಗಾ ತಾತರ್ ಉಪಭಾಷೆಗಳು ತಾತರ್‍ನಲ್ಲಿ (ಸೋವಿಯೆತ್ ದೇಶ) ಬಳಕೆಯಲ್ಲಿವೆ. ಯೂರಲ್ ಪರ್ವತಶ್ರೇಣಿ. ತೋಬೆಲ್ ಮತ್ತು ಇರ್‍ತಿಪ್ ನದೀ ಪ್ರದೇಶಗಳಲ್ಲಿರುವ ಜನಾಂಗಗಳು ಇತರ ಅನೇಕ ಭಾಷೆಗಳನ್ನು ಬಳಸುತ್ತವೆ.

(ಈ) ಈಶಾನ್ಯ (ಉಯಿಫೆರ್) ಸಮೂಹ :

ಸಮೂಹ (i) ತುವ (ಸೊವಿಯೆತ್ ದೇಶ) ಮತ್ತು ಕರಗeóïಗಳಲ್ಲಿ ಬಳಕೆಯಲ್ಲಿರುವ ತುವ (ಉರ್ಯನ ಖಯಿ) ಸಯನ್ ಪರ್ವತದ ಉತ್ತರದ ಇಳಿಜಾರು ಪ್ರದೇಶಗಳಲ್ಲಿಯೂ ಬಳಕೆಯಲ್ಲಿದೆ.

ಸಮೂಹ (ii) ಖಾಕಸ್ ವಲಯದ ಅಬಕನ್ ಮತ್ತು ಯುeóï ಹುಲ್ಲುಗಾವಲು ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಭಾಷೆಗಳು ಮತ್ತು ಉಪಭಾಷೆಗಳು, ಹಾಗೂ ಚೀನದಲ್ಲಿ ಬಳಕೆಯಲ್ಲಿರುವ ಉಯಿಫರ್ (ಸರಿ ಯೋಗುರ್) - ಈ ಸಮೂಹಕ್ಕೆ ಸೇರಿವೆ.

ಸಮೂಹ (iii) ಬರಬ ಹುಲ್ಲುಗಾವಲು ಪ್ರದೇಶ, ಓಯಿರೋತ್, ತೆಲೆಂತ್, ತೆಲೆಂಕ್, ತೋಲೇಸ್ ಮತ್ತು ಯುಕುತ್‍ಗಳಲ್ಲಿ ಬಳಕೆಯಲ್ಲಿರುವ ಭಾಷೆ ಈ ಸಮೂಹಕ್ಕೆ ಸೇರಿದೆ.

ತುರ್ಕಿ ಭಾಷೆ ಸುಮಾರು 60,000,000 ಜನಗಳ ಪ್ರಮುಖ ಭಾಷೆಯಾಗಿದ್ದು ಇದರಲ್ಲಿ 25,000,000 ಜನರು ತುರ್ಕಿಸ್ಥಾನದಲ್ಲಿಯೂ 19,000,000 ಜನರು ಸೋವಿಯತ್ ದೇಶದಲ್ಲಿಯೂ 8,000,000 ಜನರು ಚೀನದಲ್ಲಿಯೂ 8,000,000 ಜನರು ಇರಾನ್ ಮತ್ತು ಅಫ್‍ಘಾನಿಸ್ತಾನಗಳಲ್ಲಿಯೂ ಇದ್ದಾರೆ. 
ಲಕ್ಷಣಗಳು : 

ಧ್ವನಿಶಾಸ್ತ್ರ : ತುರ್ಕಿ ಭಾಷೆಗಳ ಅತ್ಯಂತ ಗಮನಾರ್ಹ ಧ್ವನಿ ಶಾಸ್ತ್ರೀಯ ಲಕ್ಷಣವೆಂದರೆ ಸ್ವರಸಾಮರಸ್ಯ. ಸ್ವರಗಳು ಎರಡು ಬಗೆಯಾಗಿರುವುದು - ಪೂರ್ವ ಸ್ವರಗಳು ಮತ್ತು ಪಶ್ಚಸ್ವರಗಳು - ಹೀಗೆ. ಶುದ್ಧ ತುರ್ಕಿ ಶಬ್ದಗಳಲ್ಲಿ ಪೂರ್ವ ಅಥವಾ ಪಶ್ಚಸ್ವರಗಳು ಮಾತ್ರ ಇರುತ್ತವೆ. ಎಲ್ಲ ಪರಪ್ರತ್ಯಗಳು ಮತ್ತು ಮಧ್ಯಪ್ರತ್ಯಯಗಳು ಶಬ್ದದಲ್ಲಿನ ತಮ್ಮ ಹಿಂದಿನ ಅಕ್ಷರದ ಸ್ವರಗಳಿಗೆ ಅನುರೂಪವಾಗಿ ಹೊಂದಿಕೊಳ್ಳುತ್ತವೆ. ಇಷ್ಟಾಗಿಯೂ ಕೆಲವು ತುರ್ಕಿ ಭಾಷೆಗಳಲ್ಲಿ ಈ ಸ್ವರ ಸಾಮರಸ್ಯ, ಕೆಲಮಟ್ಟಿಗೆ, ಭಂಗಗೊಂಡಿದೆ; ಉಜóಬೇಕ್‍ನ ಕೆಲವು ನಿರ್ದಿಷ್ಟ ಉಪಭಾಷೆಗಳಲ್ಲಿ ಇದು ಎದ್ದು ಕಾಣುತ್ತದೆ. ತುರ್ಕಿಭಾಷೆಯ ವಿದೇಶಿ ಶಬ್ದಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ.

ತಮ್ಮ ಭಾಷೆಯ ಪ್ರಾಚೀನ ರೂಪದಲ್ಲಿ ತುರ್ಕಿ ಭಾಷೆಗಳು ಬಹುಶ : ದೀರ್ಘ ಮತ್ತು ಹ್ರಸ್ವ ಸ್ವರಗಳನ್ನು ಹೊಂದಿದ್ದಿರಬಹುದಾದರೂ, ಅರಬ್ಬಿ ಮತ್ತು ಪಾರಸಿಗಳಂಥ ವಿದೇಶೀ ಭಾಷೆಗಳಿಂದ ಎರವಲಾಗಿ ಬಂದಿರುವ ಶಬ್ದಗಳನ್ನು ಬಿಟ್ಟರೆ ಈಗ ದೀರ್ಘಸ್ವರಗಳು ಅಪೂರ್ವವಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ. ಸ್ವಲ್ಪ ಮಟ್ಟಿಗೆ ಯಾಕುತ್ ಮತ್ತು ತುರ್ಕ್‍ಮೆನ್‍ಗಳು ಮಾತ್ರ ಸ್ವರಗಳ ಮೂಲಕ ಮಾತ್ರಾಪ್ರಮಾಣವನ್ನು ಉಳಿಸಿಕೊಂಡಿವೆ.

ವ್ಯಂಜನಗಳ ಕೆಲವೊಂದು ಬದಲಾವಣೆಗಳು ತುರ್ಕಿ ಭಾಷೆಗೇ ವಿಶಿಷ್ಟವಾಗಿರುವಂಥವು. ಸ್ವರಗಳು ಹಿಂಬಾಲಿಸಿದಾಗ ಕೆಲವು ವ್ಯಂಜನಗಳು ಬದಲಾಗುತ್ತವೆ. ಪುರೋಗಾಮಿ ಆತ್ಮೀಕರಣದಲ್ಲಿ ಇತರ ಕೆಲವು ವ್ಯಂಜನಗಳನ್ನು ಹಿಂಬಾಲಿಸಿದಾಗ ಕೆಲವೊಂದು ವ್ಯಂಜನಗಳು ಬದಲಾಗುತ್ತವೆ.

ರೂಪಶಾಸ್ತ್ರ ಮತ್ತು ವ್ಯಾಕರಣ ರಚನೆ : ತುರ್ಕಿ ಭಾಷೆಗಳ ರೂಪಶಾಸ್ತ್ರ ಮತ್ತು ವಾಕ್ಯರಚನೆ ಸಮಾಸ ಅಥವಾ ಸಂಶ್ಲೇಷ ವಿಧಾನಕ್ಕೆ ಒಳಪಟ್ಟಿದೆ. ವಿಶಿಷ್ಟ ಪ್ರತ್ಯಯ ವೊಂದರಿಂದ ಬಹುವಚನ ಚೂಚಿತವಾಗುವುದರಿಂದ, ವಚನ ವಿಭಕ್ತಿ ಪ್ರತ್ಯಯಗಳಿಗೆ ತೊಡಕಾಗುವುದಿಲ್ಲ. ಇದರ ಪರಿಣಾಮವಾಗಿ ಗಮನಾರ್ಹವಾದ ನಿಯತತ್ವ ಮತ್ತು ವಿಶ್ಲೇಷಣ ಸೌಕರ್ಯ ಸಮನಿಸಿದೆ.
ತುರ್ಕಿ ಭಾಷೆಗಳ ವಾಕ್ಯರಚನೆ ತರ್ಕಬದ್ಧವೂ ನಿಯತವೂ ಆಗಿದೆ. ಸಂಬಂಧ ಸೂಚಕ ಸರ್ವನಾಮಗಳು ಇಲ್ಲವಾಗಿವೆಯಾದರೂ ಕೃದಂತಗಳ ಮತ್ತು ಕೃನ್ನಾಮಗಳಾ ಬೃಹತ್ ಭಂಡಾರವೇ ಇದೆ.

ವಿಶಿಷ್ಟ ಲಕ್ಷಣಗಳನ್ನು ಮುಂದಿರಿಸುವ ವಿವಿಧ ಪದ ವರ್ಗಗಳಲ್ಲಿ ತುರ್ಕಿ ಕ್ರಿಯಾ ಪದ ವಿಶೇಷ ಉಲ್ಲೇಖಕ್ಕೆ ಅರ್ಹವಾಗಿವೆ. ಧಾತು ಮತ್ತು ಕ್ರಿಯಾಂತರಗಳ ನಡುವೆ ಒಂದು ಅಥವಾ ಹಲವು ಮಧ್ಯಪ್ರತ್ಯಗಳನ್ನು ಸೇರಿಸಿ ಕರ್ಮಣೀಪ್ರಯೋಗ, ಪ್ರೇರಣಾರ್ಥಕ ಪ್ರಯೋಗ, ಪರಸ್ಪರ ಸಂಬಂಧ, ನಿಷೇಧ ಹಾಗೂ ಅಸಾಧ್ಯತೆಗಳನ್ನು ಸೂಚಿಸಬಹುದು.

ಎಲ್ಲ ತುರ್ಕಿ ಭಾಷೆಗಳೂ ಅಸಾಮಾನ್ಯ ಸಂಖ್ಯೆಯ ಕಾಲಗಳನ್ನೂ ಸಮ್ಮಿಶ್ರ ಕಾಲಗಳನ್ನೂ ಹೊಂದಿರುತ್ತವೆ. ಇವುಗಳಿಂದ ಅರ್ಥದ ಸೂಕ್ಷ್ಮಛಾಯೆಗಳನ್ನು ಅಭಿವ್ಯಕ್ತಿಗೊಳಿಸಲು ಸಾಧ್ಯವಾಗುತ್ತದೆ. ಇಷ್ಟಾಗಿಯೂ ಆಧುನಿಕ ತುರ್ಕಿಸ್ಥಾನದ ತುರ್ಕಿಭಾಷೆಯೊಂದನ್ನು ಬಿಟ್ಟರೆ, ಬೇರಾವುದೇ ತುರ್ಕಿ ಭಾಷೆಯಲ್ಲಿ ಭವಿಷ್ಯತ್ ಕಾಲಗಳು ಇಲ್ಲ ಅಥವಾ ಅವುಗಳ ಬಳಕೆ ಇಲ್ಲ. 
ಒಂದೇವೇಳೆ ಮತ್ತು ಕಾಲದಲ್ಲಿ ಬಳಕೆಯಾಗಿರುವ, ಆದರೆ ವಿವರಗಳಲ್ಲಿ ಬೇರೆಯಾಗಿರುವ, ಕ್ರಿಯಾಪದಗಳ ಸರಣಿ ವಾಕ್ಯದಲ್ಲಿ ಇದ್ದರೆ ಅಗತ್ಯವಾಗಿರುವ ಕ್ರಿಯಾಂತವನ್ನು ಆ ಸರಣಿಯಲ್ಲಿನ ಕೊನೆಯ ಕ್ರಿಯಾಪದಕ್ಕೆ ಮಾತ್ರ ಸೇರಿಸಲಾಗುತ್ತದೆ. ಉಳಿದವುಗಳಿಗೆ ಅವುಗಳ ಸ್ಥಾನದಲ್ಲಿ ಸಂಕ್ಷಿಪ್ತ ಕ್ರಿಯಾಂತ ಅಥವಾ ಪ್ರತ್ಯಯವನ್ನೂ ಸೇರಿಸಲಾಗುತ್ತದೆ.

ಕ್ರಿಯೆಯ ಪರಿಕಲ್ಪನೆಯನ್ನೂ ಒಂದಾದ ಮೇಲೆ ಒಂದರಂತೆ ಬರುವ ಅರ್ಥಾತ್ ಅನುಸ್ಯೂತವಾದ ಎರಡು ಅಥವಾ ಹೆಚ್ಚು ಕ್ರಿಯಾಪದಗಳಿಂದ ಸೂಚಿಸುವುದು ಅನೇಕ ತುರ್ಕಿ ಭಾಷೆಗಳ ವಿಶಿಷ್ಟ ಲಕ್ಷಣ.
(ಎಂ.ಒ.ಎಚ್.; ಜೆ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ